ASSIGNMENT----09
ASSIGNMENT--09
ಶಿಕ್ಷಕರಿಗೆ ವೃತ್ತಿ ನೈಪುಣ್ಯತೆ
ವಿಷಯ:ಸಮಾಜ ವಿಜ್ಞಾನ
ಸಿದ್ದಪಡಿಸಿದವರು:ಶ್ರೀ ಸಿದ್ದಪ್ಪ.ಲಕ್ಷಟ್ಟಿ
ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆದೇಶದ ಮೇರೆಗೆ ವರ್ಕ್ ಫ್ರಮ್ ಹೋಮ್ ಪ್ರಯುಕ್ತ ಶಿಕ್ಷಕರಿಗೆ ಮನೆಯಲ್ಲಿ ಕೆಲಸ ನಿರ್ವಹಿಸಲು ನೀಡಿರುವುದರಿಂದ ಅದರ ನಿಮಿತ್ಯವಾಗಿ ತಂತ್ರಜ್ಞಾನ ಆಧಾರಿತ ಪಾಠ ಬೋಧನೆ ಮಾಡುವುದು ಶಿಕ್ಷಕರಿಗೆ ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಆಗಿದೆ.
ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ ನಮ್ಮ ವೃತ್ತಿಯಲ್ಲಿ ಪರಿಸರದಲ್ಲಿ ಒತ್ತಡವನ್ನು ನಿಭಾಯಿಸುವ ವೃತ್ತಿ ನೈಪುಣ್ಯ ಸಾಧಿಸಬೇಕಾಗಿದೆ ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಉತ್ತಮ ಚಿಂತನೆ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ನಾಯಕತ್ವಗುಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳವಣಿಗೆಯಾಗುತ್ತದೆ ಶಿಕ್ಷಕರ ಮಾನಸಿಕ ಸ್ವಾಸ್ಥ್ಯ ಉತ್ತಮವಾದಷ್ಟು ದೈಹಿಕ ಸ್ವಾಸ್ಥ್ಯವೂ ಉತ್ತಮವಾದ ಆಗ ಅದು ವರ್ಗಕೋಣೆಯಲ್ಲಿ ಪ್ರತಿಫಲನಗೊಂಡು ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ವಿದ್ಯಾರ್ಥಿ ಬರುತ್ತಾನೆ
ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ ಕಲಿಕೆಯಲ್ಲಿ ತೀವ್ರಗತಿಯ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಪ್ರಯತ್ನ ಪಡುತ್ತಲೇ ಇರುತ್ತದೆ ಕರ್ನಾಟಕ ಸರ್ಕಾರ ಅನೇಕ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಯಾರಿಗೆ ತರಲು ಯೋಜನೆ ಹಾಕಿಕೊಂಡಿದೆ ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮನೆಯಿಂದಲೇ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿದೆ.
ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಹರಸಾಹಸ ಪಡುವಂತಾಗಿದೆ ಇಂದು ಕೋವಿಡ್ 19 ಪ್ರಪಂಚವನ್ನೇ ಬಾಧಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅನೇಕ ಚಟುವಟಿಕೆಗಳಲ್ಲಿ ತೊಡಗಿ ಹೊಸಹೊಸ ವಿಧಾನಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ ಅವುಗಳೆಂದರೆ.
1. ಉತ್ತಮ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ಪಡೆಯುವುದು ಈಗಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಕಂಪ್ಯೂಟರ್ ಮೂಲ ಪರಿಕಲ್ಪನೆಗಳು ಕಲಿಕೆ
2. ವಿಷಯಕ್ಕೆ ಸಂಬಂಧಿಸಿದ ಅನೇಕ ಸಹಸಂಬಂಧ ಪುಸ್ತಕಗಳನ್ನು ಓದುವುದರ ಮೂಲಕ ವಿಷಯದ ಹೆಚ್ಚಿನ ಜ್ಞಾನ ಸಂಪಾದನೆ
3. ಮೊಬೈಲ್ನಲ್ಲಿ ಯೂಟ್ಯೂಬ್ ಅಲ್ಲದೆ ಅನೇಕ ಆನ್ಲೈನ್ ಚಾನಲ್ ಗಳನ್ನು ವೀಕ್ಷಣೆ ಮಾಡಿ ವಿಷಯದ ಜ್ಞಾನ ಹೆಚ್ಚಿಸಿಕೊಳ್ಳುವುದು
4. ದೂರದರ್ಶನದಲ್ಲಿ ಬರುವ ಆನ್ಲೈನ್ ತರಗತಿಗಳನ್ನು ವೀಕ್ಷಿಸಿ ಅದರ ಮೂಲಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು.
5. ವಿಷಯಕ್ಕೆ ಸಂಬಂಧಿಸಿದ ಪಾಠ ಬೋಧನೆಗೆ ಅನುಕೂಲವಾದ ಅನೇಕ ಹೊಸ ಹೊಸ ಪಾಠೋಪಕರಣಗಳ ನ್ನು ತಯಾರಿಸುವುದು.
6. ಸಹದ್ಯೋಗಿ ಮಿತ್ರರ ಜೊತೆಗೆ ಪಾಠ ಬೋಧನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು.
7. ವಿದ್ಯಾರ್ಥಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಬೇಕಾದ ಮೂಲ ವಿಷಯಗಳನ್ನು ತಿಳಿಸುವುದು.
8. ಆನ್ಲೈನ್ ತರಬೇತಿಯ ಮೂಲಕ ಶಿಕ್ಷಕರು ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದುವ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು
ಈ ಮೇಲಿನ ಎಲ್ಲಾ ಅಂಶಗಳನ್ನು ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಅಳವಡಿಸಿಕೊಂಡು ಇವತ್ತಿನ ಈ ಒಂದು ಪರಿಸ್ಥಿತಿ ಯಲ್ಲಿ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನಾರ್ಜನೆ ಗಳನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಗುಣಾತ್ಮಕ ಶಿಕ್ಷಕರಾದಾಗ ಮಾತ್ರ ಉತ್ತಮ ಪ್ರಜೆಗಳನ್ನು ತಯಾರಿಸಲು ಸಾಧ್ಯ.
Comments
Post a Comment